ರಾಸ ಎಂದೇ ಪ್ರಖ್ಯಾತರಾದ ರಾ. ಸತ್ಯನಾರಾಯಣ (೮ ಮೇ ೧೯೨೭ - ೧೭ ಜನವರಿ ೨೦೨೦) ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಬಹುಶ್ರುತ ವಿದ್ವಾಂಸ ಮತ್ತು ಸಂಪನ್ಮೂಲ ವ್ಯಕ್ತಿ. ಸಂಗೀತಶಾಸ್ತ್ರದ ಹಲವು ಕೃತಿಗಳ ಸಂಪಾದನೆ, ಅನುವಾದ ಮಾಡಿ ಆ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಸಂಗೀತಶಾಸ್ತ್ರ ಮಾತ್ರವಲ್ಲದೇ ಪ್ರಯೋಗ ನೃತ್ಯ, ಯೋಗ, ವ್ಯಾಕರಣ, ಮಂತ್ರತಂತ್ರ, ವೇದ-ವೇದಾಂತ, ಮೀಮಾಂಸೆ, ಛಂದಸ್ಸು, ಗಮಕ ಹೀಗೆ ಹಲವು ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿದ್ದರು. == ವೈಯಕ್ತಿಕ ಜೀವನ == ಹುಟ್ಟಿದ್ದು ೮ ಮೇ ೧೯೨೭, ಮೈಸೂರಿನಲ್ಲಿ. ಇವರದ್ದು ಸಂಗೀತಗಾರರ ಮನೆತನ. ತಂದೆ ರಾಮಯ್ಯ ಜಯಚಾಮರಾಜ ಒಡೆಯರ್ ಅವರ ಆಸ್ಥಾನದಲ್ಲಿ ಸಂಗೀತ ವಿದ್ವಾಂಸರಾಗಿದ್ದರು, ತಾಯಿ ವರಲಕ್ಷ್ಮಮ್ಮ. ಅಣ್ಣಂದಿರಾದ ಚಂದ್ರಶೇಖರಯ್ಯ ಮತ್ತು ಸೀತಾರಾಮ ಅವರು 'ಮೈಸೂರು ಸಹೋದರರು' ಎಂದೇ ಗಾಯನದಲ್ಲಿ ಹೆಸರುವಾಸಿ. ತಮ್ಮ ರಾ. ವಿಶ್ವೇಶ್ವರನ್ ವೈಣಿಕರು. ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ. ಇನ್ ಆರ್ಗ್ಯಾನಿಕ್ ಕೆಮಿಸ್ಟ್ರಿ ಪ್ರೊಫೆಸರ್. ಪುತ್ರ ರಾ. ನಂದಕುಮಾರ್ ಹಾಗೂ ಪುತ್ರಿ ರೋಹಿಣಿ ಸುಬ್ಬರತ್ನ. == ಕೃತಿಗಳು == ಸಂಗೀತರತಾಕರ ಗ್ರಂಥದ ಸ್ವರಗತಾದ್ಯಾಯದ ಮೊದಲ ೨೭೬ ಶ್ಲೋಕಗಳ ಅನುವಾದ, ಟಿಪ್ಪಣಿ, ವಿವರಣೆ ಗ್ರಂತಥ 'ನರ್ತನನಿರ್ಣಯಿ' ಗ್ರಂಥದ ಇಂಗ್ಲೀಶ್ ಅನುವಾದ, ವಿವರಣೆ (ಮೂರು ಸಂಪುಟ) ಪುಂಡರೀಕಮಾಲಾ ಚತುರ್ದಂಡಿ ಪ್ರಕಾಶಿಕಾ ಶ್ರೀವಿದ್ಯಾಷೋಡಶಿಕಾ ವೀಣಾಲಕ್ಷಣಾ ವಿಮರ್ಶೆ ಕರ್ನಾಟಕ ಸಂಗೀತವಾಹಿನಿ ಭರತನಾಟ್ಯ-ಎ ಕ್ರಿಟಿಕಲ್ ಸ್ಟಡಿ ಬೃಹದ್ದೇಶೀ ಮ್ಯೂಸಿಕ್ ಆಫ್ ಮಾಂಕ್ಸ್ ಮೈಸೂರಿನ ನಾಲ್ಕು ಸಂಗೀತರಾಜರು ಏಳೆ ಭಾರತೀಯ ಸಂಗೀತದಲ್ಲಿ ಪರಿಭಾಷಾ ಪ್ರಯೋಗ ಕರ್ನಾಟಕ ಮ್ಯೂಸಿಕ್: ಆಸ್ ಎಸ್ತೆಟಿಕ್ ಫಾರ್ಮ್ ಸೃಷ್ಟಿ- ದಿ ಸ್ಕಾಲಿಕ್‌ ಫೌಂಡೇಷನ್‌ ಕರ್ನಾಟಕ ಸಂಗೀತ ಸುಳಾದಿಗಳು ಮತ್ತು ಊಗಭೋಗಾದಿಗಳು == ಫ್ರಶಸ್ತಿ ಗೌರವಗಳು == ಪದ್ಮಶ್ರೀ ಪುರಸ್ಕಾರ, ೨೦೧೮ ಕಾಶಿ ವಿವಿಯ ಮಹೋಪಾಧ್ಯಾಯ ಪ್ರಶಸ್ತಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ, ೨೦೧೪ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ == ನಿಧನ == ೧೭ಜನವರಿ ೨೦೨೦ರಂದು ಮೈಸೂರಿನ ತಮ್ಮ ನಿವಾಸದಲ್ಲಿ ಮರಣಹೊಂದಿದರು. ಅವರಿಗೆ ೯೩ ವರ್ಷ ವಯಸ್ಸಾಗಿತ್ತು. == ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == ರಾ. ಸತ್ಯನಾರಾಯಣ, ಕಣಜ ಅಂತರಜಾಲ ಜ್ನಾನಕೋಶ]